ಶ್ರೀ ಶಿವರಾಮು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಶಿವರಾಮು ಕನ್ನಡದಲ್ಲಿ ಸ್ವಾತಂತ್ರ್ಯವೀರ ಸಾವರಕರ್ ಮಾತಿನಲ್ಲೇ ಮೂಡಿಬಂದ 'ಆತ್ಮಾಹುತಿ' ಕೃತಿಯ ಕರ್ತೃ. ಕನ್ನಡದಲ್ಲಿ ರಾಷ್ಟ್ರೀಯ ಸಾಹಿತ್ಯವನ್ನು ಬರೆದವರಲ್ಲಿ ಪ್ರಮುಖರೆಂದು ಹೇಳಲಾಗುತ್ತದೆ. ಶಿವರಾಮು ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರಾಗಿದ್ದರು. ರಾಷ್ಟ್ರೋತ್ತಾನ ಪರಿಷತ್ ಮೂಲಕ ಹಲವು ಕೃತಿಗಳನ್ನು ಹೊರತಂದಿದ್ದಾರೆ.

ತಮ್ಮ ಎಳೆ ವಯಸ್ಸಿನಲ್ಲೇ ಮನೆಯನ್ನು ತ್ಯಜಿಸಿ, ದೇಶ ಸೇವೆಗಾಗಿ ಸರ್ವ ಸಮರ್ಪಣೆ ಮಾಡುವ ಮನೋಭಾವದಿಂದ ದುಡಿದ ದೇಶಪ್ರೇಮಿಯೂ ಹೌದು. ಪ್ರತಿಭಾವಂತ ಕವಿಯಾದ ಇವರ ಕವಿತೆಗಳಲ್ಲಿ ಹುದುಗಿರುವ ದೇಶಪ್ರೇಮದ ಝಲಕು ಎಂತಹ ಹೃದಯದಲ್ಲಿಯೂ ರಾಷ್ಟ್ರಪ್ರೇಮದ ಬೀಜ ಬಿತ್ತುವಲ್ಲಿ ಸಫಲವಾಗುವುದರಲ್ಲಿ ಸಂದೇಹವೇ ಇಲ್ಲ.

ಇವರು ತಮ್ಮ ಜೀವನದ ಕೊನೆಯ ದಿನಗಳನ್ನು ಮಂಗಳೂರು ಬಳಿಯ ಅಳಿಕೆ ಸತ್ಯಸಾಯಿ ವಿಹಾರದಲ್ಲಿ ಕಳೆದರೆಂದು ಹೇಳಲಾಗುತ್ತದೆ.