ಮೂಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಮೂಸ್ ಅದಕ್ಕೆ ಹಗುರ ಮತ್ತು ಗಾಳಿಯಂಥ ರಚನೆಯನ್ನು ಕೊಡಲು ಗಾಳಿ ಗುಳ್ಳೆಗಳನ್ನು ಅಳವಡಿಸಿಕೊಳ್ಳುವ ಒಂದು ತಯಾರಿಸಲಾದ ಆಹಾರ. ತಯಾರಿಕಾ ವಿಧಾನಗಳನ್ನು ಆಧರಿಸಿ ಅದು ಹಗುರ ಹಾಗೂ ನವಿರಿನಿಂದ ಕೆನೆಯಂಥ ಹಾಗೂ ಗಟ್ಟಿವರೆಗೆ ವ್ಯಾಪಿಸಬಹುದು. ಮೂಸ್ ಸಿಹಿಯಾಗಿರಬಹುದು ಅಥವಾ ಉಪ್ಪುಖಾರದಿಂದ ಕೂಡಿರಬಹುದು. ಡಿಜ಼ರ್ಟ್ ಮೂಸ್‍ಗಳನ್ನು ವಿಶಿಷ್ಟವಾಗಿ ಕಡೆದ ಮೊಟ್ಟೆ ಬಿಳಿ ಅಥವಾ ಕಡೆದ ಕೆನೆಯಿಂದ ತಯಾರಿಸಲಾಗುತ್ತದೆ ಮತ್ತು ಚಾಕಲೇಟ್, ಕಾಫಿ, ಕ್ಯಾರಮೆಲ್, ತಿಳ್ಳು ಮಾಡಿದ ಹಣ್ಣುಗಳು ಅಥವಾ ವಿವಿಧ ಮೂಲಿಕೆಗಳು ಮತ್ತು ಪುದೀನಾ ಅಥವಾ ವನಿಲಾದಂತಹ ಸಂಬಾರ ಪದಾರ್ಥಗಳಿಂದ ಪರಿಮಳಯುಕ್ತವಾಗಿಸಲಾಗುತ್ತದೆ. ಅದನ್ನು ಕೆಲವೊಮ್ಮೆ ಜೆಲಟಿನ್‍ನಿಂದ ಸ್ಥಿರಗೊಳಿಸಲಾಗುತ್ತದೆ.

"https://kn.wikipedia.org/w/index.php?title=ಮೂಸ್&oldid=998622" ಇಂದ ಪಡೆಯಲ್ಪಟ್ಟಿದೆ